Submission 2490

ಇಳಿಯದ ಅಮಲು

Submitted By: ನೀರಜಾ ನಾರಾಯಣ ಗಣಾಚಾರಿ

----------------------------------

ತೇಲುತ ನಿನ್ನ ಗುಂಗಿನಲ್ಲಿ ಮನದಲಿ ಏರಿದೆ ಪ್ರೀತಿಯ ಅಮಲು ನೀನಿರದಿದ್ದರೂ ಜೊತೆಗೆ ಆವರಿಸಿದೆ ಇಂದಿಗೂ ನಿನ್ನ ಪ್ರೇಮದ ಅಮಲು ದಶಕಗಳೇ ಕಳೆದರೂ ನಿತ್ಯ ನೂತನ, ಹಳತಾಗದೆಂದಿಗೂ ನಿನ್ನ ಪ್ರೇಮದ ಅಮಲು ನನ್ನ ಮನದ ಮಹಲಿನಲಿ ದಿನದಿನಕ್ಕೂ ಕಾಡಿದೆ ಪ್ರೀತಿಯ ಅಮಲು ನಿನ್ನ ಮುದ್ದು ಮುಖದ ಕಿರು ನಗೆ ನಿನ್ನ ಪ್ರೇಮದ ನೋಟ ಎಂದೆಂದೂ ಇಳಿಯದ ಅಮಲು ಸಾಕೆನಗೆ ನಿನ್ನ ನಗೆಯ ಹೊನಲು ಪಸರಿಸಲು ತನು ಮನದಿ ಪ್ರೀತಿಯ ಅಮಲು ಪ್ರೀತಿಯ ಅಮಲು ಬೀರಿದ ನಿನ್ನ ಹೃದಯಕೆ ಸದಾ ಪ್ರೀತಿಯೇ ದೊರಕಲಿ!

----------------------------------

Reg ID: BF25-5290

Please Note - You can vote only Once. If you have already voted - the voting will be disabled automatically by the system.

8
Votes
145
Views
10 Months
Since posted

VOTING Closed on Nov 30, 2025!

Scroll to Top