ನೀನು ಬದುಕುವೆಯಾ?
Submitted By: L.P.Kulkarni
----------------------------------
ಮೀನು ಹೇಳಿತು ಮನುಜನಿಗೆ. ಹೇ ಮಾನವ, ಏನಿದು ನಿನ್ನ ದುರಾಸೆ! ಸರಳ ಬಳಕೆಗೆಂದು ಪ್ಲಾಸ್ಟಿಕ್ ಬಳಸುತಿರುವೆ. ನೀ ಬಳಸುವ ಈ ಪ್ಲಾಸ್ಟಿಕ್ ಸಮುದ್ರ ಸೇರುತಿದೆ. ನಮ್ಮ ಹೊಟ್ಟೆಯನ್ನೂ ಸೇರಿದೆ. ನಮ್ಮನ್ನು ತಿಂದ ನೀನು ಬದುಕುವೆಯಾ? ಸಣ್ಣ ಪ್ಲಾಸ್ಟಿಕ್ ಕಣಗಳಿಂದು ಗಾಳಿ ಸೇರುತಿವೆ. ತಿನ್ನುವ ಅನ್ನದಲ್ಲೂ ಪ್ಲಾಸ್ಟಿಕ್ ಇದೆ. ತಾಯಿಯ ಎದೆ ಹಾಲಿನಲ್ಲೂ ಪ್ಲಾಸ್ಟಿಕ್ ಕಣಗಳು. ಇಂತಹ ಗಾಳಿ,ಅನ್ನ,ಹಾಲು ಸೇವಿಸಿದ ನೀನು ಬದುಕುವೆಯಾ? ವ್ಯೂಮದಿ ಮನೆ ಕಟ್ಟಲು ಹೊರಟಿರುವೆ. ರಾಕೆಟ್ಟು,ಕೃತಕ ಕಾಯಗಳನು ಅಲ್ಲಿಗೆ ಕಳಿಸಿರುವೆ. ಅಲ್ಲಿಯೂ ಹದಗೆಡುತ್ತಿದೆ ವಾತಾವರಣ. ಹೀಗಾಗಿ ಕಾಣುತ್ತಿಲ್ಲ,ಗ್ರಹ,ತಾರೆ-ನಕ್ಷತ್ರ. ಭೂಮಿಯ ಮಲಿನಿಸಿ,ವ್ಯೂಮವ ಕೆಡಿಸಿ, ನೀನು ಬದುಕುವೆಯಾ?
----------------------------------
Reg ID: BF25-5272
Please Note - You can vote only Once. If you have already voted - the voting will be disabled automatically by the system.