ಅವಶ್ಯಕತೆ.
Submitted By: ಯತಿ
----------------------------------
ಎಲ್ಲರ ಕಲ್ಮಶವ ತೊಳೆಯುವ ನೀರು, ಕದಡಿ ಕೆಸರಾಯಿತೆಂದರೆ ಯಾರೂ ಮುಟ್ಟರು. ವರುಷಕ್ಕೊಮ್ಮೆ ದೇವರ ಹೊತ್ತು ಮೆರೆವ ತೇರು, ಜಾತ್ರೆ ಮುಗಿದದಾದ ಮೇಲೆ ಯಾರೂ ನೋಡರು. ಮಳೆಗಾಲದಲ್ಲಿ ಛತ್ರಿ ಎಲ್ಲೆಂದು ಹುಡುಕುವ ಎಲ್ಲರೂ, ಮಳೆನಿಂತಾದ ಮೇಲೆ ಈ ದರಿದ್ರ ಛತ್ರಿ ಭಾರ ಎನ್ನುವರು. ಅವಶ್ಯಕತೆ ಇದ್ದಾಗಲೇ ಎಲ್ಲರೂ ನೆಂಟರು. ನಾವು ಸೋತಾಗ, ಸೋತು ಬಿದ್ದಾಗ ಯಾರೂ ಕೈ ಹಿಡಿಯರು.
----------------------------------
Reg ID: BF25-5187
Please Note - You can vote only Once. If you have already voted - the voting will be disabled automatically by the system.