Submission 2053

ಕನಸು

Submitted By: SARASWATHI T S

----------------------------------

ಕನಸು ಕಾಣುತ್ತಿರುವೆ ನಾನೊಂದು ನನ್ನ ಬಾಲ್ಯದ ದಿನಗಳನು ನೆನೆದು. ಅಪ್ಪ ಅಮ್ಮ ಅಣ್ಣ ಅಕ್ಕಂದಿರ ಜೊತೆಗಿತ್ತು ಒಡನಾಟ ಸ್ನೇಹಿತರೊಂದಿಗೆ ಕೂಡಿ ಮಾಡಿದ ತುಂಟಾಟ. ಶಾಲೆಯಲಿ ಗಂಟೆ ಬಾರಿಸಿದರೆ ಸಿಗುತಿತ್ತು ಆಟ ಪಾಠ ಶಿಸ್ತು ಮರೆತರೆ ಬೀಳುತಿತ್ತು ಗುರುಗಳ ಶಿಕ್ಷೆಯ ಊಟ. ಮನೆಯಲ್ಲಿ ಅಜ್ಜ ಅಜ್ಜಿಯರ ಕಥೆಗಳ ಹೂರಣ ಮನದಲ್ಲಿಯೇ ಕಟ್ಟುತ್ತಿದ್ದೆವು ಕಲ್ಪನೆಯ ತೋರಣ. ನೆರಹೊರೆಯವರೊಡನೆ ಬೆರೆತು ಕಲಿತ ಕಷ್ಟಕಾರ್ಪಣ್ಯದ ಕಾಲ ಅದರಿಂದ ಸಾಗಿಸುತ್ತಿರುವೆ ಇಂದಿನ ಜೀವನ ಜಾಲ. ಇಂದಿನ ಮಕ್ಕಳಿಗೆ ಯಾಕಿಲ್ಲ ಇಂತಹ ಅನುಭವ ಅವರ ಕಲ್ಪನಾ ಲೋಕಕ್ಕೆ ಆಗಿದೆ ಈ ಸುಮಧುರ ಅನುಭವಗಳ ಅಭಾವ.

----------------------------------

Reg ID: BF25-5162

Please Note - You can vote only Once. If you have already voted - the voting will be disabled automatically by the system.

0
Votes
103
Views
11 Months
Since posted

VOTING Closed on Nov 30, 2025!

Scroll to Top