Submission 1992

ಬದುಕು ಅಷ್ಟೆ!

Submitted By: HaraveSangannaPrakash

----------------------------------

ಹುಟ್ಟಿನಿಂದ ಸಾಯುವರೆಗೂ ಬದುಕು, ಜನಿಸಿದೆ ನೀನು ತಂದೆ - ತಾಯಿಗೆ ಮಗನಾಗಿ ಬೆಳೆದೆ ನೀನು ಬಂಧು ಬಳಗದ ಜೊತೆಗೆ ಆಡಿದೆ,ಕುಣಿದೆ ದೊಡ್ಡವನಾದೆ ಸ್ನೇಹಿತರ ಜೊತೆಗೂಡಿ, ಕಲಿತೆ, ಬರದೆ,ಉತ್ತಿರ್ಣನಾದೆ ಪರೀಕ್ಷೆಯಲ್ಲಿ ಜೀವನಕ್ಕಾಗಿ - ಹೊಟ್ಟೆಪಾಡಿಗಾಗಿ ಊರುಬಿಟ್ಟೆ, ಗೊತ್ತಿಲ್ಲದ ಊರಿನ ದಾರಿಗಳಲ್ಲಿ ನನ್ನ‌ ಬದುಕ ದಾರಿ ಹುಡುಕುತ ಚಿಂತೆಯ ಜೊತೆಗೆ ಸಿಕ್ಕ‌ ಸಿಕ್ಕ ಕೆಲಸ ಮಾಡುತ ದಾರಿ‌ ಸಿಕ್ಕಾಗ ಜೊತೆ ಆದಳು ಅವಳು ಈ ಬದುಕಿಗೆ! ಮತ್ತೆ ಹೊಸ ಜೀವನ ಅವಳೊಂದಿಗೆ!! ಬದುಕು ತಿರುಗುತ ತಿರುಗುತ ಕಳೆದವು ದಿನಗಳು, ಮನೆ- ಮಡದಿ - ಮಕ್ಕಳು ಹೀಗೆ ಇವರಿಗಾಗಿ ಬದುಕು ಸವೆಯುತಲೆ ಇದೆ, ಇಲ್ಲಿ‌ ಎಲ್ಲವೂ ಶೂನ್ಯ, ಸಾಯಲು ನಾವು ಬದುಕಿರವಷ್ಟು ದಿನ ಬದುಕಬೇಕು ಅಷ್ಟೆ!!

----------------------------------

Reg ID: BF25-5148

Please Note - You can vote only Once. If you have already voted - the voting will be disabled automatically by the system.

0
Votes
106
Views
11 Months
Since posted

VOTING Closed on Nov 30, 2025!

Scroll to Top