Submission 1965

ಕಣ್ಣಿಗೆ ಕಾಣುವ ಭಗವಂತ ಅಪ್ಪ

Submitted By: Jyoti Anand Chandukar

----------------------------------

ನಮಗೋಸ್ಕರ ಹಗಲು ರಾತ್ರಿಯೆನ್ನದೆ ದುಡಿಯುವ ಅಪ್ಪ ಅಮ್ಮ ಕಣ್ಣಾದರೆ ಕಣ್ಣನ್ನು ರಕ್ಷಿಸುವ ರೆಪ್ಪೆ ಅಪ್ಪ ಬದುಕೆಂದರೆ ಧೈರ್ಯ ಎಂದು ಅರ್ಥ ಮಾಡಿಸಿದ್ದು ಅಪ್ಪ ಸದಾ ನೆರಳಾಗಿ ಇರುವ ಜೀವ ಅಪ್ಪ ಎತ್ತಿ ಆಡಿಸಿ ಮುತ್ತು ಕೊಟ್ಟು ಸಾಕಿದೆ ನೀನು ಅಪ್ಪ ಬದುಕೆಂಬ ಪಯಣದಲ್ಲಿ ದಾರಿ ದೀಪವಾದೆ ನೀನು ಅಪ್ಪ ಪರಿವಾರದ ದೋಣಿಯನ್ನು ಸಾಗಿಸುವ ನಾವಿಕ ನೀನು ಅಪ್ಪ ಜನ್ಮ ಜನ್ಮoತರಾ ಋಣ ತೀರಿಸಲಾಗದ ಭಗವಂತ ಅಪ್ಪ. ಅಪ್ಪನ ಪ್ರೀತಿಗೆ ಬೆಲೆ ಕಟ್ಟಲಾಗದು ಅಕ್ಕರೆಯ ಅಗಣಿತ ಪಾಲು ಅಪ್ಪನದು ಗದರು ಮೀಸೆಯ ಹೃದಯವಂತಿಕೆ ಅಪ್ಪನದು ಪದಗಳೇ ಇಲ್ಲ ಪೋಣಿಸಲು ಶಬ್ದ ಕೋಶವಿದು ನನ್ನ ಬದುಕಿನ ಭರವಸೆಯ ದಿಕ್ಸೂಚಿ ಅಪ್ಪ ಸಾಧನೆಯನ್ನು ಹುಡುಕಿ ಸಾಗು ಎಂದು ಹೇಳಿದಾತ ಅಪ್ಪ ಕಣ್ಣಿಗೆ ಕಾಣುವ ಭಗವಂತ ಅಪ್ಪ

----------------------------------

Reg ID: BF25-5144

Please Note - You can vote only Once. If you have already voted - the voting will be disabled automatically by the system.

126
Votes
532
Views
1 Year
Since posted

VOTING Closed on Nov 30, 2025!

Scroll to Top